ವೇಣೂರು
	ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಒಂದು ಹಳ್ಳಿ. ಬೆಳ್ತಂಗಡಿಯಿಂದ 19 ಕಿಮೀ ದೂರದಲ್ಲಿದೆ. ಇದೊಂದು ಪ್ರಸಿದ್ಧ ಜೈನ ತೀರ್ಥಕ್ಷೇತ್ರ. ಶಾಸನಗಳಲ್ಲಿ ಏಣೂರೆಂದು ಉಲ್ಲೇಖವಾಗಿದೆ. ಈ ಊರು ಮೊದಲಿಗೆ ಅಜಿಲರ ರಾಜಧಾನಿಯಾಗಿತ್ತು. ವಿಜಯನಗರದ ಕಾಲದಲ್ಲಿ ಇದು ಮಂಗಳೂರು ರಾಜ್ಯಪಾಲರ ಅಧೀನದಲ್ಲಿತ್ತು. ಅನಂತರ ಕೆಳದಿ ನಾಯಕರ, ಬ್ರಿಟಿಷರ ವಶವಾಯಿತು.

	ಇಲ್ಲಿ ಎಂಟು ಜೈನಬಸದಿಗಳು ಮತ್ತು ಏಕಶಿಲೆಯಲ್ಲಿ ಕೆತ್ತಿರುವ 35† ಎತ್ತರದ ಗೊಮ್ಮಟ ವಿಗ್ರಹ ಇವೆ. ಈ ವಿಗ್ರಹ ಗುರುಪುರ ಹೊಳೆಯ ದಕ್ಷಿಣದಂಡೆಯಲ್ಲಿ ವಿಶಾಲ ಬಂಡೆಯ ಮೇಲಿದೆ. ಈ ವಿಗ್ರಹವನ್ನು 1604ರಲ್ಲಿ ವೀರ ತಿಮ್ಮಣ್ಣ ಅಜಿಲ ಪ್ರತಿಷ್ಠಾಪಿಸಿದ. ಬಸದಿಯಲ್ಲಿರುವ ತೀರ್ಥಂಕರರ ವಿಗ್ರಹಗಳನ್ನು ಸುಂದರವಾಗಿ ಕೆತ್ತಲಾಗಿದೆ. ಇಲ್ಲಿ ಒಂದು ಮಹಾದೇವ ದೇವಾಲಯವಿದೆ. ಈ ಸ್ಥಳದ ಮೂಲಕ ಫಲ್ಗುಣಿ ನದಿ ಹಾದುಹೋಗುತ್ತದೆ.					
(ಪಿ.ಜಿ.ಬಿ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ